ಹಿಂದೆ ವಿಕ್ರಮ ಎಂಬ ಹೆಸರಿನ ಒಬ್ಬ ಶಕ್ತಿಶಾಲಿ ರಾಜನಿದ್ದನು. ಅವನಿಗೆ ಪ್ರಕೃತಿ ಮತ್ತು ಹೂವುಗಳೆಂದರೆ ಬಹಳ ಪ್ರೀತಿ. ಅವನು ತನ್ನ ಅರಮನೆಯ ಹಿಂಭಾಗದಲ್ಲಿ ಅತ್ಯಂತ ಸುಂದರವಾದ ಮತ್ತು ವಿಶಾಲವಾದ ಒಂದು ಹೂವಿನ ತೋಟವನ್ನು ನಿರ್ಮಿಸಿದ್ದನು. ಆ ತೋಟದಲ್ಲಿ ಪ್ರಪಂಚದ ಎಲ್ಲಾ ಬಣ್ಣದ ಹೂವುಗಳಿದ್ದವು.
ರಾಜ ವಿಕ್ರಮನು ತನ್ನ ಅತಿಥಿಗಳನ್ನು ತೋಟಕ್ಕೆ ಕರೆದೊಯ್ದು ತೋರಿಸುವ ಅಭ್ಯಾಸ ಹೊಂದಿದ್ದನು. ತೋಟವು ತುಂಬಾ ಅಚ್ಚುಕಟ್ಟಾಗಿದ್ದವು. ಆದರೆ, ಆ ಸುಂದರವಾದ ತೋಟದ ಒಂದು ಮೂಲೆಯಲ್ಲಿ ಒಂದು ಹಳೆಯ ಮತ್ತು ಸಣ್ಣ ಮರದ ಗುಡಿಸಲು ಇತ್ತು. ಆ ಸುಂದರವಾದ ತೋಟದ ನಡುವೆ ಆ ಗುಡಿಸಲು ನೋಡಲು ಸ್ವಲ್ಪ ವಿಚಿತ್ರವಾಗಿ ಕಾಣುತ್ತಿತ್ತು.
ಅರಮನೆಗೆ ಬರುವ ಇತರ ರಾಜರು ಮತ್ತು ಪ್ರಭುಗಳು ಆ ಗುಡಸಿಯನ್ನು ನೋಡಿ ಆಶ್ಚರ್ಯಪಡುತ್ತಿದ್ದರು. ಇಷ್ಟು ದೊಡ್ಡ ರಾಜನ ತೋಟದಲ್ಲಿ ಈ ಪುಟ್ಟ ಗುಡಿಸಲು ಏಕಿದೆ ಎಂದು ಅವರು ಯೋಚಿಸುತ್ತಿದ್ದರು. ಆದರೆ, ರಾಜನ ಭಯದಿಂದ ಯಾರೂ ಅದನ್ನು ಕೇಳುವ ಧೈರ್ಯ ಮಾಡಲಿಲ್ಲ.
ಒಂದು ದಿನ ನೆರೆಯ ರಾಜ್ಯದ ರಾಜಕುಮಾರ ಆರ್ಯನು ಅರಮನೆಗೆ ಬಂದನು. ತೋಟವನ್ನು ನೋಡುತ್ತಿದ್ದಾಗ ಅವನ ಕಣ್ಣು ಆ ಗುಡಸಿನ ಮೇಲೆ ಬಿತ್ತು. ಅವನು ಧೈರ್ಯ ಮಾಡಿ ರಾಜನನ್ನು ಕೇಳಿದನು, "ಮಹಾರಾಜರೇ, ನಿಮ್ಮ ತೋಟವು ತುಂಬಾ ಅದ್ಭುತವಾಗಿದೆ. ಆದರೆ ಈ ಹಳೆಯ ಗುಡಿಸಲು ಇಲ್ಲಿ ಏಕಿದೆ?"
ರಾಜ ವಿಕ್ರಮನು ನಗುತ್ತಾ ಹೇಳಿದನು, "ರಾಜಕುಮಾರನೇ, ಈ ಗುಡಿಸಲು ಕೇವಲ ಒಂದು ಕಟ್ಟಡವಲ್ಲ, ಇದು ಧೈರ್ಯದ ಸಂಕೇತ."
ರಾಜನು ವಿವರಿಸಿದನು, "ಈ ತೋಟವನ್ನು ಮಾಡುವಾಗ ನಾನು ಈ ಹಳೆಯ ಮನೆಗಳನ್ನು ತೆರವುಗೊಳಿಸಲು ಹೇಳಿದ್ದೆ. ಆದರೆ ಅಲ್ಲಿ ವಾಸಿಸುತ್ತಿದ್ದ ಒಬ್ಬ ವೃದ್ಧೆ, ತನ್ನ ಮನೆ ತನ್ನ ಪೂರ್ವಜರ ಆಸ್ತಿ ಎಂದು ಹೇಳಿ, ಅಲ್ಲಿಂದ ಹೋಗಲು ನಿರಾಕರಿಸಿದರು. ಅವರ ಆ ಧೈರ್ಯ ಮತ್ತು ಮಾತಿನ ಗಾಂಭೀರ್ಯ ನನ್ನನ್ನು ಬೆರಗುಗೊಳಿಸಿತು. ಅಧಿಕಾರಕ್ಕಿಂತ ವ್ಯಕ್ತಿಯ ಆತ್ಮವಿಶ್ವಾಸ ದೊಡ್ಡದು ಎಂದು ನಾನು ಅಂದು ತಿಳಿದುಕೊಂಡೆ. ಆ ಧೈರ್ಯವನ್ನು ಗೌರವಿಸಲು ನಾನು ಈ ಗುಡಸಿಯನ್ನು ಹಾಗೆಯೇ ಉಳಿಸಿದ್ದೇನೆ."
Moral
ತನ್ನ ನಂಬಿಕೆಯಲ್ಲಿ ದೃಢವಾಗಿ ಇರುವುದೇ ನಿಜವಾದ ಸಾಹಸ.